ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ ||
2.ಬೆಂದಾವಿಗೆಯ ಭಾಂಡ ಒಂದೊಂದು ಭೋಗವನು
ಅಂದಂದಿಗುಂಡು ಒಡೆದು ಹಂಚಾದಂತೆ
ಬಿಂದುವಿನ ದೇಹ ಸರ್ವಜ್ಞ ||
3.ನೆಡೆವುದೊಂದೇ ಭೂಮಿ ಕುಡಿವುದೊಂದೇ ಜಲವು
ಸುಡುವಾಗ್ನಿ ಒಂದೇ ರೀತಿಯಲಿರಲು ಈ ನಡುವೆ
ಕುಲ-ಜಾತಿ ಎತ್ತಣದು ಸರ್ವಜ್ಞ ||
4.ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ
ಜಾತಿ-ವಿಜಾತಿ ಎನ್ನಬೇಡ ಆ ದೇವನೊಲಿ
ದಾತನೇ ಜಾತ ಸರ್ವಜ್ಞ ||
5. ಪಂಚವಿಂಶತಿ ತತ್ವ ಸಂಚದ ದೇಹವನು
ಹಂಚೆಂದು ಕಾಣಲರಿಯದೆ ಭವ ಮುಂದೆ
ಗೊಂಚಲಾಗಿಹುದು ಸರ್ವಜ್ಞ ||
6. ಊರುಗಳ ಮೂಲದಲಿ ಮಾರನರಮನೆಯಲ್ಲಿ
ಭೂರಿ ಜೀವಿಗಳ ಹುಟ್ಟಿಸಿದ ಅಜನಿಗಿ
ನ್ನಾರು ಸರಿಯುಂಟೆ ಸರ್ವಜ್ಞ ||
7. ದಿಟವೇ ಪುಣ್ಯದ ಬೀಜ ನಟೆಯ ಪಾಪದ ಪುಂಜ
ಕುಟಿಲ ವಂಚನೆಗೆ ಪೋಗದಿರಿ-ನಿಜವ ಪಿಡಿ
ಘಟ್ಟವನೆಚ್ಚದಿರಿ ಸರ್ವಜ್ಞ ||
8. ಸುರ-ತರುವು ಸುರಜೇನು ಸುರಮಣಿ ಸುರಲತೆ
ಪರುಪುಷ್ಟಿ ತನುವು ಹರಿವ ನದಿ-ಯೆಲ್ಲವೂ
ಪರಮನಿಂ ಜನನ ಸರ್ವಜ್ಞ ||
9. ಕುಲಗೆಟ್ಟವರ ಚಿಂತೆ ಯೊಳಗಿರ್ಪರೆಂತೆಲ್ಲಾ
ಕುಲಗೆಟ್ಟ ಶಿವನ ಮೊರೆಹೊಕ್ಕು ಋಷಿಗಳು
ಕುಲಗೋತ್ರರುಗಳು ಸರ್ವಜ್ಞ ||
10. ನಾಲ್ಕು ವೇದವನೋದಿ ಶೀಲದಲಿ ಶುಚಿಯಾಗಿ
ಶೂಲಿಯಾ ಪದವ ಮರೆದೊದೊಡೆ-ಗಿಳಿಯೋದಿ
ಮಲ ತಿಂದಂತೆ ಸರ್ವಜ್ಞ ||
11. ಕಾಯವಿಂದ್ರಿಯದಿಂದೆ ಜೀವ ವಾಯುವಿನಿಂದೆ
ಕಾಯುವನು ಬ್ರಹ್ಮಸೃಷ್ಟಿ ಎಂದೆಂಬವನ
ಬಾಯ ನೋಡೆಂದ ಸರ್ವಜ್ಞ ||
12. ಜಾತಿ ಸೂತಕವಳಿದು ಭ್ರಾಂತಿಯ ಗುಣವಳಿದು
ಆತುಮನ ನೆಲೆಯ ನರಿತಂಗೆ-ಇ
ನ್ನೇತರ ಚಿಂತೆ ಸರ್ವಜ್ಞ ||
13. ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲಾ
ಮುಟ್ಟಬೇಡೆಂದು ತೊಲಗುವಾ ಹಾರುವನು
ಹುಟ್ಟಿದನು ಎಲ್ಲಿ ಸರ್ವಜ್ಞ ||
14. ಸತ್ತವನು ತಿಂಬಾತ ಎತ್ತಣದ ಹೊಲೆಯವನು
ಒತ್ತಿ ಜೀವವನು ಕೊರೆ-ಕೊರೆದು ತಿಂಬಾತ ತಾ
ನುತ್ತಮದ ಹೊಲೆಯ ಸರ್ವಜ್ಞ ||
15. ಹೊಲೆಯ ಮಾದಿಗರುಂಡು ತೊಲಗಿ ಬೆಟ್ಟಾ ತೊಗಲು
ಕುಲಜರಿಗೆ ಅನುವಾಯ್ತು-ಹೊಲೆಯರಾ
ನೆಲೆಯಾರು ಬಲ್ಲರೈ ಸರ್ವಜ್ಞ ||
16. ಪಕ್ಕಳೆಯ ಸಗ್ಗಳೆಯೊಳಿಕ್ಕಿದ ನೀರನು
ಚೊಕ್ಕಟವೆನುತ ಕುಡಿವರು ಹೊಲೆ
ಯರಾ ಮಕ್ಕಳಂತೆ ಸರ್ವಜ್ಞ ||
17. ಹಲವು ಮಕ್ಕಳು ಹುಟ್ಟಿ ಕುಲವ ಹೇಳುವರಿಲ್ಲ
ಕುಲಹೀನನೊಬ್ಬ ಮಗ ಹುಟ್ಟಿ-ಆತಗನು
ಕೂಲವ ಹೇಳುವನು ಸರ್ವಜ್ಞ ||
18. ವೇದವೇ ಘನವೆಂದು ವಾದವನು ಮಾಡುವರು
ವೇದದಲೇನು ನಿಜವಾಯ್ತು ದ್ವಿಜರೊಂದು
ಬೂದಿಯಾದುದ ಕಂಡೆ ಸರ್ವಜ್ಞ ||
19. ಜೀವ ಜೀವವ ತಿಂದು ಜೀವಿಪುದು ಜಗವೆಲ್ಲ
ಜೀವದಿಂ ಬೇರೆ ತಿಂಬುವರ ನಾ ಕಾಣೆ ಇ
ನ್ನ್ಯಾವುದೆಂದೆಂಬೆ ಸರ್ವಜ್ಞ ||
20. ನೀರಮುಳಗಿದ ವಿಪ್ರ ಸಾರುವನೆ ಸ್ವರ್ಗವನು
ಓರಂತೆ ನೀರ ಮುಳುಗಿದ ಕಪ್ಪೆಗಿ
ನ್ನ್ಯಾರು ಸರಿಯಹರು ಸರ್ವಜ್ಞ ||
21. ಹಾರುವನಿಗಿತ್ತವರು ಯಾರು ಬದುಕಿದರಯ್ಯ
ಭೂರಮಣನೆಂಬ ಬಲಿ ಕೆಟ್ಟ-ಹಾರುವರು
ಮಾರಿಕಂಡಯ್ಯ ಸರ್ವಜ್ಞ ||
22. ಹೊಲಗೇರಿಯಲಿ ಹುಟ್ಟಿ ಎಲ್ವಿನಾ ಮನೆ ಮಾಡಿ
ಸಲೆ ಚರ್ಮಧಾರಿ ಎನಿಸಿದ- ಮನುಜರು
ಕುಲವ ಹೇಳುವವರು ಸರ್ವಜ್ಞ ||
23. ಯೋನಿಜರು ಯೋನಿಯನು ಹೀನ ಮಾಡುವುದೇಕೆ
ಆನಂದಮಯ ಶಿವಯೋಗಿ-ಅದಲ್ಲ
ದಿನ್ನೆಲ್ಲಿಂದ ಬಂದ ಸರ್ವಜ್ಞ ||
24. ನರಜನುಮದಲಿ ಹುಟ್ಟಿ ವರಶಾಸ್ತ್ರಗಳನ್ನೋದಿ
ಪರಮ ಪುಣ್ಯದಲಿ ತೊಳಲುವಾ-ನಿಜ ಪುರುಷ
ಹರಪುರಕೆ ಯೋಗ್ಯ ಸರ್ವಜ್ಞ ||
25. ಜೀವರಾಶಿಗಳೆಲ್ಲ ದೇವತಾಮಯವಕ್ಕು
ಭಾವಿಸಿ ನೋಡೆ ಜೀವತಾ-ಶಿವನ
ದೇವಾಲಯವೇ ಅಕ್ಕು ಸರ್ವಜ್ಞ ||
26. ಮೂರೆಳೆಯನುಟ್ಟಾತ ಹಾರುವೊಡೆ ಸ್ವರಗಕ್ಕೆ
ನೂರೆಳೆಯ ಕೌದಿಯನು ಹೊದ್ದವನು-ತಾ
ಹಾರನೇಕಯ್ಯಾ ಸರ್ವಜ್ಞ ||
27. ಇಕ್ಕುವವನೂರಿಗೊಂ ಹೊಕ್ಕಲೆಂದೆನಬೇಡ
ಅಕ್ಶಯ ಪದವಿ ಪಡೆದು-ಕೈಲಾಸದಿಂ
ದೊಕ್ಕಲಿರ ಬಂದ ಸರ್ವಜ್ಞ ||
28. ಮುಟ್ಟು ಕಂಡವಳನ್ನು ಮುಟ್ಟಲೊಲ್ಲರು ನೋಡು
ಮುಟ್ಟು ತಾ ತಡೆದು- ಹುಟ್ಟಿದಾ ಮಗುವನ್ನು
ಮುಟ್ಟುತಿಹರೇಕೆ ಸರ್ವಜ್ಞ ||
ಕುಲವಾವುದಯ್ಯ ಸರ್ವಜ್ಞ ||
2.ಬೆಂದಾವಿಗೆಯ ಭಾಂಡ ಒಂದೊಂದು ಭೋಗವನು
ಅಂದಂದಿಗುಂಡು ಒಡೆದು ಹಂಚಾದಂತೆ
ಬಿಂದುವಿನ ದೇಹ ಸರ್ವಜ್ಞ ||
3.ನೆಡೆವುದೊಂದೇ ಭೂಮಿ ಕುಡಿವುದೊಂದೇ ಜಲವು
ಸುಡುವಾಗ್ನಿ ಒಂದೇ ರೀತಿಯಲಿರಲು ಈ ನಡುವೆ
ಕುಲ-ಜಾತಿ ಎತ್ತಣದು ಸರ್ವಜ್ಞ ||
4.ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ
ಜಾತಿ-ವಿಜಾತಿ ಎನ್ನಬೇಡ ಆ ದೇವನೊಲಿ
ದಾತನೇ ಜಾತ ಸರ್ವಜ್ಞ ||
5. ಪಂಚವಿಂಶತಿ ತತ್ವ ಸಂಚದ ದೇಹವನು
ಹಂಚೆಂದು ಕಾಣಲರಿಯದೆ ಭವ ಮುಂದೆ
ಗೊಂಚಲಾಗಿಹುದು ಸರ್ವಜ್ಞ ||
6. ಊರುಗಳ ಮೂಲದಲಿ ಮಾರನರಮನೆಯಲ್ಲಿ
ಭೂರಿ ಜೀವಿಗಳ ಹುಟ್ಟಿಸಿದ ಅಜನಿಗಿ
ನ್ನಾರು ಸರಿಯುಂಟೆ ಸರ್ವಜ್ಞ ||
7. ದಿಟವೇ ಪುಣ್ಯದ ಬೀಜ ನಟೆಯ ಪಾಪದ ಪುಂಜ
ಕುಟಿಲ ವಂಚನೆಗೆ ಪೋಗದಿರಿ-ನಿಜವ ಪಿಡಿ
ಘಟ್ಟವನೆಚ್ಚದಿರಿ ಸರ್ವಜ್ಞ ||
8. ಸುರ-ತರುವು ಸುರಜೇನು ಸುರಮಣಿ ಸುರಲತೆ
ಪರುಪುಷ್ಟಿ ತನುವು ಹರಿವ ನದಿ-ಯೆಲ್ಲವೂ
ಪರಮನಿಂ ಜನನ ಸರ್ವಜ್ಞ ||
9. ಕುಲಗೆಟ್ಟವರ ಚಿಂತೆ ಯೊಳಗಿರ್ಪರೆಂತೆಲ್ಲಾ
ಕುಲಗೆಟ್ಟ ಶಿವನ ಮೊರೆಹೊಕ್ಕು ಋಷಿಗಳು
ಕುಲಗೋತ್ರರುಗಳು ಸರ್ವಜ್ಞ ||
10. ನಾಲ್ಕು ವೇದವನೋದಿ ಶೀಲದಲಿ ಶುಚಿಯಾಗಿ
ಶೂಲಿಯಾ ಪದವ ಮರೆದೊದೊಡೆ-ಗಿಳಿಯೋದಿ
ಮಲ ತಿಂದಂತೆ ಸರ್ವಜ್ಞ ||
11. ಕಾಯವಿಂದ್ರಿಯದಿಂದೆ ಜೀವ ವಾಯುವಿನಿಂದೆ
ಕಾಯುವನು ಬ್ರಹ್ಮಸೃಷ್ಟಿ ಎಂದೆಂಬವನ
ಬಾಯ ನೋಡೆಂದ ಸರ್ವಜ್ಞ ||
12. ಜಾತಿ ಸೂತಕವಳಿದು ಭ್ರಾಂತಿಯ ಗುಣವಳಿದು
ಆತುಮನ ನೆಲೆಯ ನರಿತಂಗೆ-ಇ
ನ್ನೇತರ ಚಿಂತೆ ಸರ್ವಜ್ಞ ||
13. ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲಾ
ಮುಟ್ಟಬೇಡೆಂದು ತೊಲಗುವಾ ಹಾರುವನು
ಹುಟ್ಟಿದನು ಎಲ್ಲಿ ಸರ್ವಜ್ಞ ||
14. ಸತ್ತವನು ತಿಂಬಾತ ಎತ್ತಣದ ಹೊಲೆಯವನು
ಒತ್ತಿ ಜೀವವನು ಕೊರೆ-ಕೊರೆದು ತಿಂಬಾತ ತಾ
ನುತ್ತಮದ ಹೊಲೆಯ ಸರ್ವಜ್ಞ ||
15. ಹೊಲೆಯ ಮಾದಿಗರುಂಡು ತೊಲಗಿ ಬೆಟ್ಟಾ ತೊಗಲು
ಕುಲಜರಿಗೆ ಅನುವಾಯ್ತು-ಹೊಲೆಯರಾ
ನೆಲೆಯಾರು ಬಲ್ಲರೈ ಸರ್ವಜ್ಞ ||
16. ಪಕ್ಕಳೆಯ ಸಗ್ಗಳೆಯೊಳಿಕ್ಕಿದ ನೀರನು
ಚೊಕ್ಕಟವೆನುತ ಕುಡಿವರು ಹೊಲೆ
ಯರಾ ಮಕ್ಕಳಂತೆ ಸರ್ವಜ್ಞ ||
17. ಹಲವು ಮಕ್ಕಳು ಹುಟ್ಟಿ ಕುಲವ ಹೇಳುವರಿಲ್ಲ
ಕುಲಹೀನನೊಬ್ಬ ಮಗ ಹುಟ್ಟಿ-ಆತಗನು
ಕೂಲವ ಹೇಳುವನು ಸರ್ವಜ್ಞ ||
18. ವೇದವೇ ಘನವೆಂದು ವಾದವನು ಮಾಡುವರು
ವೇದದಲೇನು ನಿಜವಾಯ್ತು ದ್ವಿಜರೊಂದು
ಬೂದಿಯಾದುದ ಕಂಡೆ ಸರ್ವಜ್ಞ ||
19. ಜೀವ ಜೀವವ ತಿಂದು ಜೀವಿಪುದು ಜಗವೆಲ್ಲ
ಜೀವದಿಂ ಬೇರೆ ತಿಂಬುವರ ನಾ ಕಾಣೆ ಇ
ನ್ನ್ಯಾವುದೆಂದೆಂಬೆ ಸರ್ವಜ್ಞ ||
20. ನೀರಮುಳಗಿದ ವಿಪ್ರ ಸಾರುವನೆ ಸ್ವರ್ಗವನು
ಓರಂತೆ ನೀರ ಮುಳುಗಿದ ಕಪ್ಪೆಗಿ
ನ್ನ್ಯಾರು ಸರಿಯಹರು ಸರ್ವಜ್ಞ ||
21. ಹಾರುವನಿಗಿತ್ತವರು ಯಾರು ಬದುಕಿದರಯ್ಯ
ಭೂರಮಣನೆಂಬ ಬಲಿ ಕೆಟ್ಟ-ಹಾರುವರು
ಮಾರಿಕಂಡಯ್ಯ ಸರ್ವಜ್ಞ ||
22. ಹೊಲಗೇರಿಯಲಿ ಹುಟ್ಟಿ ಎಲ್ವಿನಾ ಮನೆ ಮಾಡಿ
ಸಲೆ ಚರ್ಮಧಾರಿ ಎನಿಸಿದ- ಮನುಜರು
ಕುಲವ ಹೇಳುವವರು ಸರ್ವಜ್ಞ ||
23. ಯೋನಿಜರು ಯೋನಿಯನು ಹೀನ ಮಾಡುವುದೇಕೆ
ಆನಂದಮಯ ಶಿವಯೋಗಿ-ಅದಲ್ಲ
ದಿನ್ನೆಲ್ಲಿಂದ ಬಂದ ಸರ್ವಜ್ಞ ||
24. ನರಜನುಮದಲಿ ಹುಟ್ಟಿ ವರಶಾಸ್ತ್ರಗಳನ್ನೋದಿ
ಪರಮ ಪುಣ್ಯದಲಿ ತೊಳಲುವಾ-ನಿಜ ಪುರುಷ
ಹರಪುರಕೆ ಯೋಗ್ಯ ಸರ್ವಜ್ಞ ||
25. ಜೀವರಾಶಿಗಳೆಲ್ಲ ದೇವತಾಮಯವಕ್ಕು
ಭಾವಿಸಿ ನೋಡೆ ಜೀವತಾ-ಶಿವನ
ದೇವಾಲಯವೇ ಅಕ್ಕು ಸರ್ವಜ್ಞ ||
26. ಮೂರೆಳೆಯನುಟ್ಟಾತ ಹಾರುವೊಡೆ ಸ್ವರಗಕ್ಕೆ
ನೂರೆಳೆಯ ಕೌದಿಯನು ಹೊದ್ದವನು-ತಾ
ಹಾರನೇಕಯ್ಯಾ ಸರ್ವಜ್ಞ ||
27. ಇಕ್ಕುವವನೂರಿಗೊಂ ಹೊಕ್ಕಲೆಂದೆನಬೇಡ
ಅಕ್ಶಯ ಪದವಿ ಪಡೆದು-ಕೈಲಾಸದಿಂ
ದೊಕ್ಕಲಿರ ಬಂದ ಸರ್ವಜ್ಞ ||
28. ಮುಟ್ಟು ಕಂಡವಳನ್ನು ಮುಟ್ಟಲೊಲ್ಲರು ನೋಡು
ಮುಟ್ಟು ತಾ ತಡೆದು- ಹುಟ್ಟಿದಾ ಮಗುವನ್ನು
ಮುಟ್ಟುತಿಹರೇಕೆ ಸರ್ವಜ್ಞ ||
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDeleteಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ
ReplyDelete