1. ಮುನ್ನ ಪೂರ್ವದಲಾನು ಪನ್ನಗಧರನಾಳು
ಎನ್ನಯ ಪೆಸರು ಪುಷ್ಪದತ್ತನು ಎಂದು
ಮುನ್ನಿಪರು ನೋಡು ಸರ್ವಜ್ಞ ||
ಈ ಹಿಂದೆ ನಾನು ಪರಶಿವನ ಸೇವಕ ನನ್ನ ಹೆಸರು ಪುಷ್ಪದತ್ತ
ಎಂದು ಬಲ್ಲವರು ಹೇಳುತ್ತಾರೆ
2. ಅಂದಿನಾ ಪುಷ್ಪದತ್ತ ಬಂದ ವರರುಚಿಯಾಗಿ
ಮುಂದೆ ದೇವಸಾಲೆ ಸರ್ವಜ್ನನೆಂದೆನಿಸಿ
ನಿಂದವನನ್ ನಾನೇ ಸರ್ವಜ್ಞ ||
ಹಿಂದಿನ ಆ ಪುಷ್ಪದತ್ತ ನಾದ ನಾನು ವರರುಚಿಯಾಗಿ ಬಂದು ಇದೀಗ
ದೇವಸಾಲೇ ಸರ್ವಜ್ಞನೆನೆಸಿರುವನು ನಾನೇ
3. ಮಕ್ಕಳಿಲ್ಲವೆಂದು ಅಕ್ಕ ಮಲ್ಲಮ್ಮನು
ದುಕ್ಕದಿ ಬಸವರಸಗರುಪಲು ಕಾಶಿಯ
ಮುಕ್ಕಣ್ಣನೊಲಿದನು ಸರ್ವಜ್ಞ ||
ಅಕ್ಕ ಮಲ್ಲಮ್ಮನಿಗೆ ಮಕ್ಕಳಿಲ್ಲವೆಂಬ ಚಿಂತೆ, ಈ ದುಖಃವನ್ನು ತನ್ನ ಗಂಡ
ಬಸವರಸನಿಗೆ ಹೇಳಿದಳು, ಶಿವ ಒಲಿದ
4. ಗಂಡಾಗಬೇಕೆಂದು ಪಿಂಡವ ನುಂಗಲು
ಲಂಡೆ ಮಾಳವ್ವೆಯಳು ಜನಿಸಿ, ಲೋಕದೊಳು
ಕಂಡುದನು ಪೇಳ್ವೆ ಸರ್ವಜ್ಞ ||
ಮಾಳವ್ವನಿಗೆ ಆ ಭಾಗ್ಯವಿತ್ತು, ಆಕೆಯು ಪಿಂಡವನ್ನು ನುಂಗಲು ಆಕೆಯ ಗರ್ಭದಲ್ಲಿ ಜನಿಸಿ,
ಈ ಲೋಕದಲ್ಲಿ ಕಂಡುದನ್ನು ಖಂಡಿತವಾಗಿ ಹೇಳುತ್ತೇನೆ
5. ಬಿಂದುವ ಬಿಟ್ಟು ಹೋದಂದು ಬಸವಾದಳವ
ಳಿಂದದಿಯಷ್ಟಾದಶಮಾಸ ಉದರದಲಿ
ನಿಂದು ನಾ ಬೆಳೆದೆ ಸರ್ವಜ್ಞ
ಹೀಗೆ ಬಿಂದು ಸಂಯೋಗವಾಗಿ ಆಕೆಯ ಗರ್ಭಾಂಬುದಿಯಲಿ ಎಂಟತ್ತು ತಿಂಗಳು ನಿಂತು ನಾನು ಬೆಳೆದೆನು
6.ಹೆತ್ತವಳು ಮಾಳಿ ಎನ್ನೆತ್ತಿ ತೆಗೆದಳು ಕೇಶಿ
ಕತ್ತು ಬೆನ್ನೆ ಪಿಡಿದಳು ಕಾಳಿ ಮರದೊಳೆನ್ನ
ಬೆತ್ತಲಿರಿಸಿದಳು ಸರ್ವಜ್ಞ ||
7.ಮಾಳನೂ ಮಾಳಿಯೂ ಕೂಳ್ತಿಂದ ಹೆಮ್ಮೆಯಲಿ
ಕೇಳೆ ನೀನಾರ ಮಗನೆಂದು ನಾ ಶಿವನ
ಮೇಣದಣುಗೆಂಬೆ ಸರ್ವಜ್ಞ ||
8. ತಂದೆ ಹಾರುವನಲ್ಲ ತಾಯಿ ಮಾಳಿಯೂ ಅಲ್ಲ
ಚನ್ದ್ರಶೇಖರನ ವರದಿಂದ ಪುಟ್ಟಿದ
ಕಂದ ತಾನೆಂದ ಸರ್ವಜ್ಞ ||
9. ನೂಕಿದರು ಅವರಾಗ ಕುಹಕತನದಲಿ ಬೇಗ
ಲೋಕದೊಳಗೆಲ್ಲ ಕಂಡುದನೆ ನುಡಿಯುತ
ಏಕವಾಗಿಹೆನು ಸರ್ವಜ್ಞ
10. ಹೊಲಸು ಮಾಂಸದ ಹುತ್ತ ಎಲುವಿನ ಹಂಜರವು
ಹೊಲೆ ಬಲಿದ ತನುವ ನೊಳಗಿರ್ದು-ಮತ್ತದರ
ಕುಲವ ನರಸುವರೆ ಸರ್ವಜ್ಞ ||
11. ಲಿಂಗ ಉಳ್ಳನೆ ಪುರುಷ ಲಿಂಗ ಉಳ್ಳನೆ ಸರಸ
ಲಿಂಗ ಉಳ್ಳವಗೆ ರತಿ ಭೋಗ ವತುಳ ಸುಖ
ಲಿಂಗದಿಂ ಜನನ ಸರ್ವಜ್ಞ ||
click for more vachanagalu
ಎನ್ನಯ ಪೆಸರು ಪುಷ್ಪದತ್ತನು ಎಂದು
ಮುನ್ನಿಪರು ನೋಡು ಸರ್ವಜ್ಞ ||
ಈ ಹಿಂದೆ ನಾನು ಪರಶಿವನ ಸೇವಕ ನನ್ನ ಹೆಸರು ಪುಷ್ಪದತ್ತ
ಎಂದು ಬಲ್ಲವರು ಹೇಳುತ್ತಾರೆ
2. ಅಂದಿನಾ ಪುಷ್ಪದತ್ತ ಬಂದ ವರರುಚಿಯಾಗಿ
ಮುಂದೆ ದೇವಸಾಲೆ ಸರ್ವಜ್ನನೆಂದೆನಿಸಿ
ನಿಂದವನನ್ ನಾನೇ ಸರ್ವಜ್ಞ ||
ಹಿಂದಿನ ಆ ಪುಷ್ಪದತ್ತ ನಾದ ನಾನು ವರರುಚಿಯಾಗಿ ಬಂದು ಇದೀಗ
ದೇವಸಾಲೇ ಸರ್ವಜ್ಞನೆನೆಸಿರುವನು ನಾನೇ
3. ಮಕ್ಕಳಿಲ್ಲವೆಂದು ಅಕ್ಕ ಮಲ್ಲಮ್ಮನು
ದುಕ್ಕದಿ ಬಸವರಸಗರುಪಲು ಕಾಶಿಯ
ಮುಕ್ಕಣ್ಣನೊಲಿದನು ಸರ್ವಜ್ಞ ||
ಅಕ್ಕ ಮಲ್ಲಮ್ಮನಿಗೆ ಮಕ್ಕಳಿಲ್ಲವೆಂಬ ಚಿಂತೆ, ಈ ದುಖಃವನ್ನು ತನ್ನ ಗಂಡ
ಬಸವರಸನಿಗೆ ಹೇಳಿದಳು, ಶಿವ ಒಲಿದ
4. ಗಂಡಾಗಬೇಕೆಂದು ಪಿಂಡವ ನುಂಗಲು
ಲಂಡೆ ಮಾಳವ್ವೆಯಳು ಜನಿಸಿ, ಲೋಕದೊಳು
ಕಂಡುದನು ಪೇಳ್ವೆ ಸರ್ವಜ್ಞ ||
ಮಾಳವ್ವನಿಗೆ ಆ ಭಾಗ್ಯವಿತ್ತು, ಆಕೆಯು ಪಿಂಡವನ್ನು ನುಂಗಲು ಆಕೆಯ ಗರ್ಭದಲ್ಲಿ ಜನಿಸಿ,
ಈ ಲೋಕದಲ್ಲಿ ಕಂಡುದನ್ನು ಖಂಡಿತವಾಗಿ ಹೇಳುತ್ತೇನೆ
5. ಬಿಂದುವ ಬಿಟ್ಟು ಹೋದಂದು ಬಸವಾದಳವ
ಳಿಂದದಿಯಷ್ಟಾದಶಮಾಸ ಉದರದಲಿ
ನಿಂದು ನಾ ಬೆಳೆದೆ ಸರ್ವಜ್ಞ
ಹೀಗೆ ಬಿಂದು ಸಂಯೋಗವಾಗಿ ಆಕೆಯ ಗರ್ಭಾಂಬುದಿಯಲಿ ಎಂಟತ್ತು ತಿಂಗಳು ನಿಂತು ನಾನು ಬೆಳೆದೆನು
6.ಹೆತ್ತವಳು ಮಾಳಿ ಎನ್ನೆತ್ತಿ ತೆಗೆದಳು ಕೇಶಿ
ಕತ್ತು ಬೆನ್ನೆ ಪಿಡಿದಳು ಕಾಳಿ ಮರದೊಳೆನ್ನ
ಬೆತ್ತಲಿರಿಸಿದಳು ಸರ್ವಜ್ಞ ||
7.ಮಾಳನೂ ಮಾಳಿಯೂ ಕೂಳ್ತಿಂದ ಹೆಮ್ಮೆಯಲಿ
ಕೇಳೆ ನೀನಾರ ಮಗನೆಂದು ನಾ ಶಿವನ
ಮೇಣದಣುಗೆಂಬೆ ಸರ್ವಜ್ಞ ||
8. ತಂದೆ ಹಾರುವನಲ್ಲ ತಾಯಿ ಮಾಳಿಯೂ ಅಲ್ಲ
ಚನ್ದ್ರಶೇಖರನ ವರದಿಂದ ಪುಟ್ಟಿದ
ಕಂದ ತಾನೆಂದ ಸರ್ವಜ್ಞ ||
9. ನೂಕಿದರು ಅವರಾಗ ಕುಹಕತನದಲಿ ಬೇಗ
ಲೋಕದೊಳಗೆಲ್ಲ ಕಂಡುದನೆ ನುಡಿಯುತ
ಏಕವಾಗಿಹೆನು ಸರ್ವಜ್ಞ
10. ಹೊಲಸು ಮಾಂಸದ ಹುತ್ತ ಎಲುವಿನ ಹಂಜರವು
ಹೊಲೆ ಬಲಿದ ತನುವ ನೊಳಗಿರ್ದು-ಮತ್ತದರ
ಕುಲವ ನರಸುವರೆ ಸರ್ವಜ್ಞ ||
11. ಲಿಂಗ ಉಳ್ಳನೆ ಪುರುಷ ಲಿಂಗ ಉಳ್ಳನೆ ಸರಸ
ಲಿಂಗ ಉಳ್ಳವಗೆ ರತಿ ಭೋಗ ವತುಳ ಸುಖ
ಲಿಂಗದಿಂ ಜನನ ಸರ್ವಜ್ಞ ||
click for more vachanagalu
No comments:
Post a Comment