Monday, September 13, 2021

ಸರ್ವಜ್ಞ- ವಚನಮಾಲಿಕೆ

ಕೆಲವ೦ ಬಲ್ಲವರಿ೦ದ ಕಲ್ತು

ಕೆಲವ೦ ಮಾಳ್ಪವರಿ೦ದ ಕ೦ಡು ಮತ್ತೆ

ಹಲವ೦ ತಾನೆ ಸ್ವತಃ ಮಾಡಿ ತಿಳಿ ಎ೦ದ  ಸರ್ವಜ್ಞ ||೧ ||  


ಕಚ್ಚೆ ಕೈ ಬಾಯ್ಗಳು  ಇಚ್ಚೆಯಲ್ಲಿ ಇದ್ದಿಹರೆ 

ಅಚ್ಯುತನಪ್ಪ  ಅಜನಪ್ಪ  ಲೋಕದಲಿ 

ನಿಶ್ಚಿಂತನಪ್ಪ  ಸರ್ವಜ್ಞ || ೨ ||  


ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ

ಮಿಕ್ಕ ಓದುಗಳು ತಿರುಪೆಗೆ ಮೋಕ್ಷಕ್ಕೆ

ಎರಡಕ್ಕರವೆ ಸಾಕೆ೦ದ ಸರ್ವಜ್ಞ || ೩ ||  



ಸೇ೦ದಿಯನು ಸೇವಿಪನು ಹಂದಿಯಂತಿರುತಿಹನು

ಹಂದಿಯೊಂದೆಡೆ ಉಪಕಾರಿ 

ಕುಡುಕ  ಹಂದಿಗೂ ಕಡಿಮೆ ಸರ್ವಜ್ಞ  || ೪ ||


ಬೆಚ್ಚನಾ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ 

ಇಚ್ಛೆಯನರಿತು ನಡೆವ ಸತಿಯಾಗಿ 

ಸ್ವರ್ಗಕ್ಕೆ ಕಿಚ್ಚುಬಿದ್ದಂತೆ ಸರ್ವಜ್ಞ || ೫ ||


ಪುಷ್ಪವಿಲ್ಲದ ಪೂಜೆ ಅಶ್ವವಿಲ್ಲದ ಅರಸ

ಭಾಷೆಬಾರದವಳ ಗೆಳೆತನವು 

ವ್ಯರ್ಥಕಾಣ್ಣಯ್ಯ ಸರ್ವಜ್ಞ || ೬ ||


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು

ಆಡಿ ಕೊಡುವವನು ಮಧ್ಯಮನು 

ಅಧಮ ತಾನಾಡಿ ಕೊಡದವನು ಸರ್ವಜ್ಞ  || ೭ || 



ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ 

ದುರ್ಜನರ ಸಂಗ ಬಚ್ಚಲ

ಕೊಚ್ಚೆಯಂತಿಹದು ಸರ್ವಜ್ಞ || ೮ ||


ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು

ತನ್ನ೦ತೆ ಪರರಬಗೆದೂಡೆ ಕೈಲಾಸ

ಬಿನ್ನಾಣವಕ್ಕು ಸರ್ವಜ್ಞ || ೯ ||



ಸರ್ವಜ್ಞನೆ೦ಬುವನು ಗರ್ವದಿ೦ದಾದವನೆ

ಸರ್ವರೊಳು ಒ೦ದು೦ದು ನುಡಿಗಲಿತು

ವಿದ್ಯೆಯಾ ಪರ್ವತವೆ ಆದ ಸರ್ವಜ್ಞ || ೧೦ ||



ವಿದ್ಯೆ ಕಲಿಸದ ತ೦ದೆ ಬುದ್ಧಿ ಹೇಳದ ಗುರುವು

ಬಿದ್ದಿರಲು ಬ೦ದು ನೋಡದ ತಾಯಿಯು

ಶುದ್ಧ ವೈರಿಗಳು ಸರ್ವಜ್ಞ ||೧೧ ||



ಕರೆಯದೆಲೆ ಬರುವವನ ಬರೆಯದಲೆ ಓದುವವನ

ಬರೆಗಾಲಿನಿ೦ದ ನಡೆವವನ ಕರೆತ೦ದು

ಕೆರದಿ ಹೊಡೆಯೆ೦ದ ಸರ್ವಜ್ಞ || ೧೨ ||



ಶ್ವಾನಬಾಲವು ಡೊ೦ಕು ಹೀನಮನವದು ಡೊ೦ಕು

ಕಾನನದಿ ಹರಿವ ಹೊಳೆ ಡೊ೦ಕು, ಪಿಸುಣಿಗನು

ಶಾನೆ ಡೊ೦ಕೆ೦ದ ಸರ್ವಜ್ಞ || ೧೩ ||



ಕೆಲವಂ ಬಲ್ಲವರಿಂದ  ಕಲ್ತು 

ಕೆಲವಂ ಮಳ್ಪವರಿಂದ  ಕಂಡು ಮತ್ತೆ 

ಹಲವಂ ತಾನೆ ಸ್ವತಃಮಾಡಿ ತಿಳಿ ಎಂದ ಸರ್ವಜ್ಞ   || ೧೪ ||


ಅಕ್ಕಿಯನು ಉ೦ಬುವನು ಹಕ್ಕಿಯ೦ತಾಗುವನು

ಸಿಕ್ಕು ರೋಗದಲಿ ವೈದ್ಯನಿಗೆ ರೊಕ್ಕವ

ನಿಕ್ಕುತಲಿರುವ ಸರ್ವಜ್ಞ || ೧೫ ||



ಮೂರ್ಖನಿಗೆ ಬುದ್ಧಿಯನು ನೂರ್ಕಾಲ  ಪೆಳಿದರು

ಗೋರ್ಕಲ್ಲ ಮೇಲ್  ಮಳೆ ಗರೆದರೆ 

ಆಕಲ್ಲು ನೀರುಕುಡಿವುದೆ ಸರ್ವಜ್ಞ || ೧೬ ||


ಸಾಲವನು ಕೊಂಬಾಗ  ಹಾಲೋಗರುಂಡಂತೆ 

ಸಾಲಿಗರು ಕೊಂಡು ಎಳೆವಾಗ 

ಕಿಬ್ಬದಿಯ  ಕೀಲು ಮುರಿದಂತೆ ಸರ್ವಜ್ಞ || ೧೭ ||


ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು 

ತನ್ನ೦ತೆ ಪರರ  ಬಗೆದೊಡೆ

ಕೈಲಾಸ  ಬಿನ್ನಾಣವಕ್ಕು ಸರ್ವಜ್ಞ || ೧೮ ||


ಎಲ್ಲ  ಬಲ್ಲವರಿಲ್ಲ  ಬಲ್ಲವರು ಬಹಳಿಲ್ಲ  

ಬಲವಿಲ್ಲ  ಬಲ್ಲವರಿದ್ದು 

ಸಾಹಿತ್ಯ ಎಲ್ಲರಿಗಲ್ಲ  ಸರ್ವಜ್ಞ || ೧೯ ||


ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು 

ಎತ್ತು ಗಾಣವನು ಹೊತ್ತು ತಾ

ನಿತ್ಯದಲಿ ಸುತ್ತಿಬಂದಂತೆ ಸರ್ವಜ್ಞ  || ೨೦ ||


ಏಳು ಕೋಟಿಯೆ ಕೋಟಿ, ಏಳು ಲಕ್ಷವೆe ಲಕ್ಷ 

ಏಳು ಸಾವಿರದ  ಎಪ್ಪತ್ತು ವಚನಗಳ 

ಹೇಳಿದನು ಕೇಳ  ಸರ್ವಜ್ಞ  || ೨೧ ||

===========================


No comments:

Post a Comment